ಮಗಳು
ಯಾವ ಜನ್ಮದ ಮೈತ್ರಿಯೋ
ಯಾವ ಜನ್ಮದ ಮೈತ್ರಿಯೋ
ನನಗಾಗಿಯೇ ನೀ ಬಂದೆಯೋ
ಹೂಗಲ್ಲದ ಮುದ್ದು ಮುಖದ
ನೀನೇ ನನ್ನ ಪುಟ್ಟ ಸ್ನೇಹಿತೆ.
ನನ್ನ ಬದುಕಿನ ಆಸೆಯಾದೆ
ಜಗವ ಗೆಲ್ಲುವ ಭರವಸೆಯಾವೆ
ಬಾಲ್ಶದ ನೆನಪು ಮರಳಿಸಿ
ಪುನಃ ನಿನ್ನ ಜೊತೆ ಆಡಲು ಪ್ರೇರೇಪಿಸಿವೆ.
ದಿನವಿಡೀ ಕೀಟಲೆ ನೀಡಿ
ಸಹನೆಯೇ ಬದುಕಿನ ಮೂಲ
ತಾಯ್ತನವೇ ಅಮೂಲ್ಶವೆಂದು
ಬಹು ಸರಳವಾಗಿ ನೀ ತಿಳಿಸುವೆ.
ಮಗಳೇ ಓ ಮಗಳೇ
ತಂದೆಗೆ ತಾಯಿಯಾಗುವೆ
ಹೆಂಗರುಳನ್ನು ನೀ ಬಡಿದೆಬ್ಬಿಸಿವೆ
ಬದುಕಿನ ಸುಂದರ ಉಡುಗೊರೆಯಾಗುವೆ.
ಪ್ರಿಯಾ ಅಸ್ಕಿ
ಪ್ರಿಯಾ ಅಸ್ಕಿ
Yes daughters are the best
ReplyDeleteYes, Angels of our life :)
DeleteYes life's best gift is daughter
ReplyDelete